“ಸಾವು ನಿಶ್ಚಿತ, ಭಯವಿಲ್ಲ”: ಅನ್ನಪೂರ್ಣ ಸಿಂಗ್ ಮಾತಾಜೀ ಗಂಭೀರ ಭವಿಷ್ಯಕ್ಕೆ ಬಂಗ್ಲೆ ಮಲ್ಲಿಕಾರ್ಜುನ್ ದಿಟ್ಟ ಪ್ರತಿಕ್ರಿಯೆ!

ಇನ್ನು ಒಂದು ವರ್ಷದೊಳಗೆ ನಿನ್ನ ಸಾವು ಎಂದು ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರಿಗೆ ಇದೆ ಎಂದು ಭವಿಷ್ಯ ನುಡಿದಿರುವ ಹಂಪಿಯ ಮಾತಾ ಶ್ರೀಕೃಷ್ಣ ಸನ್ನಿಧಿಯ ಪೀಠದ ಪರಮಪೂಜ್ಯರಾದ ಶ್ರೀ ಅನ್ನಪೂರ್ಣ ಸಿಂಗ್ ಮಾತಾ :- ಕಳೆದ ಎರಡು ದಿನಗಳ ಹಿಂದೆ 4 ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಸಾನಿಧ್ಯ ವಹಿಸಬೇಕೆಂದು ಗಂಗಾವತಿ ನಗರದಲ್ಲಿರುವ ಶ್ರೀ ಅನ್ನಪೂರ್ಣ ಸಿಂಗ್ ಮಾತಾಜೀ ರವರನ್ನು ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಆಹ್ವಾನಿಸಲು ಹೋದಂತ ಸಂದರ್ಭದಲ್ಲಿ ಮನಃಪೂರ್ವಕವಾಗಿ ಸಾನಿಧ್ಯವನ್ನು ವಹಿಸಲು ನೆಲಮಂಗಲಕ್ಕೆ ಆಗಮಿಸುವೆ ಎಂದು ಮಾತು ನೀಡಿದ ನಂತರ ನನ್ನ ಹಸ್ತದ ರೇಖೆಯನ್ನು ನೋಡಿ ಒಂದು ಕ್ಷಣ ಮೌನದೊಂದಿಗೆ ವಾಸ್ತವಾಂಶವನ್ನು ನನಗೆ ಈ ರೀತಿ ಹೇಳಿಕೆ ನೀಡಿ ಇನ್ನು ಮುಂದೆ ಮೈಯೆಲ್ಲಾ ಕಣ್ಣಾಗಿ ಎಚ್ಚರಿಕೆಯಿಂದ ಸಾಗಬೇಕು,ನಿನ್ನ ಭವಿಷ್ಯದಲ್ಲಿ ಇಂದು ವರ್ಷದೊಳಗೇ ನಿನ್ನ ಸಾವು ಸಂಭವಿಸಲಿದೆ ಎಂದಿದೆ ಅದೂ ಕಾಯಿಲೆಯಿಂದ ಸಾವು ಬರಬಹುದು ಆರೋಗ್ಯವನ್ನು ಎಚ್ಚರಿಕೆಯಿಂದ ಕಾಪಾಡು, ಎರಡನೆಯ ಗಂಡಾಂತರ ರಸ್ತೆ ಅಪಘಾತದಿಂದ ಸಾವು ಸಂಭವಿಸಬಹುದು ಮೂರನೇಯ ಆಪತ್ತು ನೀನು ಅತಿಯಾಗಿ ನಂಬಿದವರಿಂದಲೇ ನಿನ್ನ ಚಟ್ಟಕಟ್ಟುವುದಕ್ಕೆ ಭಗೀರಥ ಪ್ರಯತ್ನ ಸಾಗುತ್ತಿರುವುದರಿಂದ ಬಹು ಎಚ್ಚರಿಕೆಯಿಂದ ಜೀವನದ ಪಯಣ ಸಾಗು ಎಂದು ಎಚ್ಚರಿಕೆಯ ಮಾತುಗಳನ್ನು ತಮ್ಮ ಭವಿಷ್ಯವಾಣಿ ಮುಖಾಂತರ ಶ್ರೀ ಅನ್ನಪೂರ್ಣ ಸಿಂಗ್ ಮಾತಾ ರವರು ನುಡಿದಿದ್ದರೂ ಕೂಡ ಖಂಡಿತ ನನಗೆ ಭಯ ವೆಂಬುದೇ ಇಲ್ಲ,ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಂಬ ವಿಧಿ ಲಿಖಿತವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ವಾಕ್ಯವನ್ನು ನೆನೆಯುತ್ತಾ, ಎಷ್ಟಿದ್ದರೇನು ಇಲ್ಲದಿದ್ದರೇನು, ದೇವರು ಹಾಜರಾತಿ ಕೂಗಿದ ತಕ್ಷಣ ಎಲ್ಲವನ್ನು ಬಿಟ್ಟು ಎಲ್ಲರನ್ನು ಬಿಟ್ಟು ಹೋಗಲೇಬೇಕು ಅದಕ್ಕೆ ನೀವು ಹೊರತಲ್ಲ ನಾನೂ ಹೊರತಲ್ಲ,ಮುನಿಸೇಕೆ ಮನವೇ ನಾಲ್ಕು ದಿನದ ಈ ಬದುಕೆಂಬ ಸಂತೆಯಲಿ ಎಂಬ ಅರ್ಥಗರ್ಭಿತ ವಾಕ್ಯವನ್ನು ನೆನೆಯುತ್ತಾ ಉಸಿರಿರೋವರೆಗೆ ನಾಲ್ಕು ಹೆಸರಾಗುವ ಕಾಯಕ್ಕನುಗುಣವಾಗಿ ಸಾಗುತ್ತಾ.. ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಷರು,ಕಾನಿಪ ಧ್ವನಿ ಸಂಘಟನೆ.ಮೊ:-9535290300

Leave a Comment

Your email address will not be published. Required fields are marked *

Scroll to Top