



ಇಂದು ಮಧ್ಯಾಹ್ಮ 1 ಗಂಟೆಗೆ ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ಕಾನಿಪ ಧ್ವನಿ ತುಮಕೂರು ಜಿಲ್ಲಾ ಘಟಕದ ಸಾಮಾನ್ಯ ಸಭೆಯಲ್ಲಿ 50 ಕ್ಕೂ ಹೆಚ್ಚಿನ ಪದಾಧಿಕಾರಿಗಳು ಭಾಗವಹಿಸಿ ಸಂಘಟನೆಯ ಅನೇಕ ವಿಚಾರಗಳನ್ನು ಚರ್ಚೆ ನಡೆಸಿದರಲ್ಲದೇ ಮುಂಬರುವ ಬೆಳಗಾವಿಯ ಸುವರ್ಣಾ ಸೌಧದ ಮುಂಭಾಗದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಕಾನಿಪ ಧ್ವನಿ ವತಿಯಿಂದ ನಡೆಯುವ ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗಾಗಿ ನಡೆಸುವ ಧರಣಿ ಪ್ರತಿಭಟನೆ ಹೋರಾಟಕ್ಕೆ 50 ಕ್ಕೂ ಹೆಚ್ಚಿನ ಸದಸ್ಯರು ಭಾಗವಹಿಸುವುದಾಗಿ ಹೇಳಿದ ನಂತರ ನೂತನ ಜಿಲ್ಲಾಧ್ಯಕ್ಷರನ್ನಾಗಿ ಶಿವ ದರ್ಶನ,ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಕೊರಟಗೆರೆ ಆರ್.ಟಿ.ಓ.ಹನುಮಂತರಾಯಪ್ಪ,ಪ್ರಧಾನ ಕಾರ್ಯದರ್ಶಿಯಾಗಿ ಬಿ.ಜಿ.ಸಾಗರ್,ಉಪಾಧ್ಯಕ್ಷರಾಗಿ ಗುಬ್ಬಿ ಸಂತೋಷ,ಖಜಾಂಚಿಯಾಗಿ ಭರತ್,ಕಾರ್ಯದರ್ಶಿಯಾಗಿ ರಾಘವೇಂದ್ರ ರವರನ್ನು ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಆಯ್ಕೆ ಮಾಡಿದರು ಕೊನೆಯಲ್ಲಿ ರಾಜ್ಯಾಧ್ಯಕ್ಷರಿಗೆ ಎಲ್ಲಾ ಸದಸ್ಯರು ಕೂಡಿಕೊಂಡು ಆತ್ಮೀಯವಾಗಿ ಸನ್ಮಾನಿಸಿದ್ದು ವಿಶೇಷ. 9591630300
