“ಅಧಿಕಾರ, ಸಂಘಟನೆ, ವಂಚನೆ—10 ಸಾವಿರ ಪತ್ರಕರ್ತರ ಮುಂದೆ ತೆರೆದುಕೊಳ್ಳುತ್ತಿರುವ ನಗ್ನ ಸತ್ಯ!”
ಸಮಸ್ತ ಮಾಧ್ಯಮದ ಸಂಪಾದಕರು/ವರದಿಗಾರರಿಗೆ (ಪ್ರಿಂಟ್ ಮೀಡಿಯಾ,ದೃಶ್ಯ ಮಾಧ್ಯಮ,ವೆಬ್ ಸೈಟ್,ವೆಬ್ ಪೋರ್ಟ್, ಅಧಿಕೃತ ಸಾಮಾಜಿಕ ಜಾಲತಾಣಗಳು. ಸಾರ್ವಜನಿಕರ ಪರ ಹಾಗೂ ಸಮಾಜದ ಸ್ವಾಸ್ಥ ಕಾಪಾಡುವಂತ ನಿರ್ಭಯವಾಗಿ ಯಾವುದೇ ಮುಲಾಜಿಲ್ಲದೆ ಪ್ರಕಟಮಾಡುವಂತ ಸಂಪಾದಕರಿಗೆ ಹಾಗೂ ವರದಿಗಾರರಿಗೆ ಮಾತ್ರ ) ಪ್ರಕಟನೆ ಕೃಪೆಗಾಗಿ :-ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬಂತಾಗಬಾರದು ನಮ್ಮ ಮಾಧ್ಯಮದವರು ಎಂಬ ಕಾಳಜಿಯೊಂದಿಗೆ ಇಡೀ ನಾಡಿನ ಪ್ರತಿಯೊಬ್ಬ ಪತ್ರಕರ್ತರಿಗೂ ನಗ್ನ ಸತ್ಯಗಳನ್ನು ದಾಖಲೆ ಸಮೇತ ತಮ್ಮಗಳ ಮುಂದೆ :- 2018 ರ ಸಾಲಿನಲ್ಲಿ ಬಂಗ್ಲೆ ಮಲ್ಲಿಕಾರ್ಜುನ ಆದ ನಾನು ಬಳ್ಳಾರಿ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಅಖಂಡ ಬಹುಮತದೊಂದಿಗೆ ವಿಜಯದ ಮಾಲೆಯೊಂದಿಗೆ ಬಳ್ಳಾರಿ ಜಿಲ್ಲಾಧ್ಯಕ್ಷನಾಗಿ ಎರಡನೇಯ ಅವಧಿಗೆ ಆಯ್ಕೆಯಾಗಿ ಚುನಾವಣಾಧಿಕಾರಿಯಾದ ನಾಡಿನ ಹಿರಿಯ ಪತ್ರಕರ್ತರಾದ ಸಿಜಿ.ಹಂಪಣ್ಣನವರು ಘೋಷಣೆಯ ಜೊತೆಗೆ ಅಧಿಕಾರ ಪತ್ರವನ್ನು ನೀಡಿದ್ದೇ ತಡ ಆಗಿನ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾಗಿದ್ದ ರಾಜು ರವರು ನನ್ನ ಬೆಳವಣಿಗೆಯನ್ನು ಸಹಿಸದೆ ಕೂಡಲೇ ಅಂದಿನ ರಾಜ್ಯ ಚುನಾವಣಾಧಿಕಾರಿಗಳಾದ ಸು.ತ.ರಾಮೇಗೌಡರಿಂದ ನನ್ನ ಜಿಲ್ಲಾಧ್ಯಕ್ಷನ ಆಯ್ಕೆಗೆ ತಡೆ ನೀಡಿ ಆದೇಶ ಹೊರಡಿಸಿದ ಮೇಲೆ ಬೆಂಗಳೂರಿಗೆ ಹೋಗಿ ರಾಜ್ಯಾಧ್ಯಕ್ಷರಾದ ರಾಜು ರವರಿಗೆ ವಿಷಯ ಮನವರಿಕೆ ಮಾಡಿ ಕೊಟ್ಟರು ಕೂಡ ಹೃದಯ ಕರಗಲಿಲ್ಲ. ಅಂದಿನ ಸಂದರ್ಭದಲ್ಲಿ ಕಾನೂನು ಹೋರಾಟಕ್ಕೆ ಮುಂದಾದಂತ ಸಂದರ್ಭದಲ್ಲಿ ನನಗೆ ರಾಜುವಿನ ಕುರಿತು ರಾಜ್ಯ ಸಂಘದ ಹಣ ದುರುಪಯೋಗದ ಕುರಿತು ಕೆಲ ಮಾಹಿತಿಗಳು ಲಭ್ಯವಾದ ಹಿನ್ನೆಲೆಯಲ್ಲಿ ಅಂದಿನಿಂದ ಮೂರು ತಿಂಗಳುಗಳ ಕಾಲ ಬೆಂಗಳೂರಿನಲ್ಲೇ ತಳ ಊರಿ ಹೆಂಡತಿ ಮಕ್ಕಳ ಬಗ್ಗೆನೂ ಯೋಚಿಸದೇ ರಾಜ್ಯ ಸಂಘ ಹೊಂದಿರುವ ಬ್ಯಾಂಕ್ ಗಳ ವಿವರ ಪಡೆದು ಆ ಬ್ಯಾಂಕುಗಳ ಮೆನೇಜರ್ ಗಳ ಸಹಕಾರದಿಂದ ರಾಜ್ಯ ಸಂಘದ ವಹಿವಾಟಿನ ಸಂಪೂರ್ಣ ವಿವರಗಳನ್ನು ಪಡೆದ ನಂತರ ಗಾಬರಿಯಾಗುವಂತ ಅನೇಕ ಬೆಚ್ಚಿ ಬೀಳಿಸುವ ಮಾಹಿತಿಗಳಲ್ಲಿ 25 ಲಕ್ಷ ರೂ ಗಳ ಅಧಿಕ ಹಣ ಸ್ವಂತ ಬಳಕೆಗಾಗಿ ತಮ್ಮ ಸ್ವಂತ ಹೆಸರಿನಿಂದ ಅಂದಿನ ಅಧ್ಯಕ್ಷರು ಡ್ರಾ ಮಾಡಿಕೊಂಡಿರುವುದು ಬೆಳಕಿಗೆ ಬಂದ ನಂತರ, ಬ್ಯಾಂಕುಗಳ ಸಮಗ್ರ ಮಾಹಿತಿಗಳನ್ನು ಪಡೆದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಾಲಯದ ವ್ಯಾಪ್ತಿಗೆ ಇಳಪಡುವ ಹಲಸೂರು ಗೇಟ್ ಪೋಲಿಸ್ ಠಾಣೆಗೆ ನನ್ನ ಒಡಹುಟ್ಟಿದ ತಂಗಿಯಾದ ಲಾಯರ್ ಬಂಗ್ಲೆ ಉಷಾರಾಣಿ ಹಾಗೂ ಅವಳ ಸ್ನೇಹಿತರ ಬಳಗದ ಲಾಯರ್ ಗಳ ಮುಖಾಂತರ ಇನ್ಸ್ ಪೆಕ್ಟರ್ ರವರಿಗೆ ದೂರು ದಾಖಲಿಸಿ ಎಫ್.ಐ.ಆರ್. ಮಾಡಲು ವಿನಂತಿಸಿದಾಗ ಅವರು ಎನ್.ಸಿ. ಮಾಡಿ ಲೀಗಲ್ ಓಪಿನಿಯನ್ ಪಡೆದ ನಂತರ ದಾಖಲಿಸುವುದಾಗಿ ಹೇಳಿಕಾಲ ದೂಡುತ್ತಾ ಬಂದಂತ ಸಮಯದಲ್ಲಿ ಅಲ್ಲಿಂದ ನಾನು ಡಿ.ಸಿ.ಪಿ. ಹಾಗೂ ಬೆಂಗಳೂರು ಪೋಲಿಸ್ ಕಮಿಷನರ್ ರವರನ್ನು ಕಂಡು ವಿನಂತಿಸಿದರು ಕೂಡ ನನ್ನ ಮನವಿ ದೂಳು ಹಿಡಿಯುತ್ತಾ ಸಾಗಿದರೂ ಕೂಡ ಛಲ ಬಿಡದೇ ಸಾಗುವಂತ ಸಂದರ್ಭದಲ್ಲಿ ನನ್ನ ಊ ನೈಜ ಹೋರಾಟವನ್ನು ಗಮನಿಸಿದ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ದೊರೆಸ್ವಾಮಿಯವರು ಅಂದಿನ ಡಿ.ಸಿ.ಪಿ. ದೇವರಾಜ್ ರವರಿಗೆ ಕ್ಲಾಸ್ ತೆಗೆದುಕೊಂಡ ನಂತರ ನನ್ನ ಹಿಂದೆ ಬಲವಾದ ಶಕ್ತಿಯಂತೆ ನಿಂತಿದ್ದರ ಫಲವಾಗಿ ಕಾನಿಪ ಸಂಘದ ಹಿಂದಿನ ಅಧ್ಯಕ್ಷರಾದ ಎನ್.ರಾಜು ರವರ ಮೇಲೆ ಹಣಕಾಸಿನ ದುರುಪಯೋಗದಡಿ 2018 ಇಸವಿಯಲ್ಲಿ ಎಫ್.ಐ.ಆರ್. ದಾಖಲಾಗಿದ್ದು ಕಾರ್ಯನಿರತ ಪತ್ರಕರ್ತರ ಸಂಘದ ಇತಿಹಾಸದಲ್ಲೇ ಇದೊಂದು ದಾಖಲೆಯೇ ಸರಿ. ಆ ಎಫ್.ಐ.ಆರ್. ನ ಹಿಂದ ಸಿರುಗುಪ್ಪಾದ ನನ್ನ ಮನೆ, ಕೆಲಸ ಕಾರ್ಯಗಳು ಹಾಗೂ ಹೆಂಡತಿ ಮಕ್ಕಳ ಪರಿಜ್ಞಾನವಿಲ್ಲದೇ ಉಪಹಾರ ಊಟಕ್ಕೂ ಪರದಾಡುತ್ತಾ ಕೆಲವೊಂದು ನಿದ್ದೆ ಆವರಿಸಿದಂತ ಸಂದರ್ಭದಲ್ಲಿ ಲಾಯರ್ ಗಳ ಕಛೇರಿ ಮುಂಭಾಗಗಳಲ್ಲಿ ನ್ಯೂಸ್ ಪೇಪರ್ ಗಳನ್ನು ಹಾಸಿಗೆಯಂತೆ ಹಾಸಿಕೊಂಡು ಅದೆಷ್ಟೋ ದಿನ ಮಲಗಿ ಕಳೆದಂತ ನೋವುಗಳ ಅನುಭವ ನಿಜಕ್ಕೂ ಇಂದು ಮೆಲಕು ಹಾಕುತ್ತಾ ಸಂತೋಷ ಪಡುತ್ತಾ ಅವಮಾನ ಮಾಡಿದವರೇ ನಮಗೆ ಮಾರ್ಗದರ್ಶಕರು ಎಂಬ ದಾರಿಯಲ್ಲಿ ನಿಜವಾಗಿ ಸಾಗುತ್ತಾ ಅವಮಾನ ಮಾಡಿದವರನ್ನು ಇಂದಿಗೂ ಇನ್ನೆಂದಿಗೂ ನಾನು ಸ್ಮರಿಸುತ್ತಲೇ ಧೃಡ ಹೆಜ್ಜೆಗಳೊಂದಿಗೆ ಸಾಗುತ್ತಾ ಈ ಕೆ.ಯು.ಡಬ್ಲು.ಜೆ ಯ ಪ್ರಥಮ ಎಪಿಸೋಡ್ ನಿಮ್ಮ ಗಮನಕ್ಕೆ ತರುತ್ತಿದ್ದೇನೆ.
ಕೆ.ಯು.ಡಬ್ಲು.ಜೆ ಯಲ್ಲಿ ನಾನು ರಾಜ್ಯ ಕಾರ್ಯದರ್ಶಿಯಾಗಿ ಹಾಸನದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಲ್ಲರ ಹರ್ಷೋದ್ದಾರದೊಂದಿಗೆ ಆಯ್ಕೆ ಯಾಗಿದ್ದು :- ರಾಜುವರರ ಮೇಲೆ 420 ಆರೋಪದಡಿಯಲ್ಲಿ ಎಫ್.ಐ.ಆರ್. ದಾಖಲಾದ ನಂತರ ನನ್ನ ಶ್ರಮ ದಿಟ್ಟದೆಯ ಹೋರಾಟವನ್ನು ಕಾನಿಪ ಸಂಘದ ಪ್ರತಿಯೊಬ್ಬ ಪದಾಧಿಕಾರಿ ಹಾಗೂ ಸದಸ್ಯರುಗಳ ಪ್ರೀತಿಗೆ ಪಾತ್ರರಾದ ನಂತರ ಹಾಸನದಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನನ್ನನ್ನು ರಾಜ್ಯ ಕಾರ್ಯದರ್ಶಿಯಾಗಿ ಮಾಡಲೇಬೇಕೆಂಬ ಪ್ರತಿಯೊಬ್ಬ ಸದಸ್ಯರ ಕೂಗಿಗೆ ಹಾಗೂ ಒತ್ತಡಕ್ಕೆ ಅಂದಿನ ಪ್ರತಿಯೊಬ್ಬ ಪದಾಧಿಕಾರಿಯೂ ಒಪ್ಪಿಗೆ ಸೂಚಿಸಿದರೂ ಸಹ ಇದಕ್ಕೆ ಒಪ್ಪದ ಶಿವಾನಂದ ತಗಡೂರು ಕೆಲ ಕಾಲ ಗೊಂದಲ ಉಂಟು ಮಾಡಿದರೂ ಕೊನೆಗೆ ಅನಿವಾರ್ಯವಾಗಿ ಒಪ್ಪಿ
ರಾಜ್ಯ ಕಾರ್ಯದರ್ಶಿಯನ್ನಾಗಿ ಬಂಗ್ಲೆ ಯವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ ತಕ್ಷಣ ಸದಸ್ಯರುಗಳ ಜೈಕಾರದ ಕೂಗು ಮುಗಿಲೆತ್ತರಕ್ಕೆ ಮುಟ್ಟಿದ್ದು ಪ್ರತಿಯೊಬ್ಬರ ನೆನಪಿನಲ್ಲಿ ಇಂದಿಗೂ ಉಳಿದಿದೆ ಎಂದರೆ ತಪ್ಪಾಗಲಾರದು.
ಹತ್ತು ಸಾವಿರ ಪತ್ರಕರ್ತರ ಸದಸ್ಯರನ್ನು ಹೊಂದಿರುವ ದೇಶದ ಏಕೈಕ ಬೃಹತ್ ಸಂಘಟನೆಯ ಸದಸ್ಯರುಗಳಿಗೆ ತಗಡೂರು ರವರಿಂದ ಬೃಹತ್ ವಂಚನೆ :-





