ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚೆಲುವಾದಿ ನಾರಾಯಣಸ್ವಾಮಿ ಅವರನ್ನು ಭೇಟಿ: ಪತ್ರಕರ್ತರ ರಕ್ಷಣಾ ಕಾಯ್ದೆ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಮನವಿ

ಇಂದು ಸಂಜೆ 4.30 ಕ್ಕೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಮಾನ್ಯ ಚೆಲವಾದಿ ನಾರಾಯಣ ಸ್ವಾಮಿ ಯವರನ್ನು ಅವರ ಸೆವೆನ್ ಮಿನಿಸ್ಟರ್ ಕ್ವಾಟರ್ಸ್ ನಲ್ಲಿ ಭೇಟಿಯಾಗಿ ಕೆಲ ಹೊತ್ತುಗಳ ಕಾಲ ಪತ್ರಕರ್ತರ ರಕ್ಷಣಾ ಕಾಯ್ದೆ, ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆ ಕಾರ್ಯಕ್ಕೆ ಉಚಿತ ಬಸ್ -ಪಾಸ್, ಕಾರ್ಮಿಕ ಕಾಯ್ದೆಗಳನ್ನು ವರದಿಗಾರರಿಗೆ ಕಟ್ಟುನಿಟ್ಟಾಗಿ ಜಾರಿಗೊಳಿಸುವುದರ ಜೊತೆಗೆ ನಾಡಿನ ಸಮಸ್ತ ಪತ್ರಕರ್ತರ ಹಿತದೃಷ್ಟಿಯಿಂದ ಹಣಕಾಸಿನ ದುರುಪಯೋಗದಡಿಯಲ್ಲಿ ದಿನಾಂಜ:-28/03/2026 ರಂದು ಬೆಂಗಳೂರಿನ ಹಲಸೂರು ಗೇಟ್ ಪೋಲಿಸ್ ಠಾಣೆಯಲ್ಲಿ 420 ಕಲಂ ಯಡಿ ಪ್ರಕರಣ ದಾಖಲಾಗಿ ಆರೋಪ ಸ್ಥಾನದಲ್ಲಿರುವ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ಹಾಗೂ ವಿಜಯವಾಣಿ ದಿನ ಪತ್ರಿಕೆಯ ಬೆಂಗಳೂರಿನ ವರದಿಗಾರರಾದ ಶಿವಾನಂದ ತಗಡೂರು ರವರಿಗೆ ಸರ್ಕಾರ ನಾಮನಿರ್ದೇಶಿತ ಹುದ್ದೆ ಹಾಗೂ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ರದ್ದು ಪಡಿಸಬೇಕೆಂಬ ಮನವಿಯನ್ನು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ವಿವರಿಸುವುದರೊಂದಿಗೆ ಮನವಿ ಸಮರ್ಪಿಸಿದರು. ಅದೇ ರೀತಿಯಾಗಿ ಕನ್ನಡ ಮತ್ತು ಸಂಸ್ಕ್ರೃತಿ ಇಲಾಖೆಯ ಸಚಿವರಿಗೂ ನೀಡಲಾಗಿರುವ ಮನವಿಯ ಪ್ರತಿ ತಮಗಾಗಿ. 9535290300

Leave a Comment

Your email address will not be published. Required fields are marked *

Scroll to Top