ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಇಂದು ಹರಿಹರ ನಗರಸಭೆಯ ಆಯುಕ್ತರಾದ ಯಿರಮ್ಮ ರವರನ್ನು ಭೇಟಿಯಾಗಿ ಪತ್ರಿಕಾ ಭವನದ ವಿಚಾರ ಆದಷ್ಟು ಶೀಘ್ರ ಸೂಕ್ತ ಕ್ರಮವಹಿಸಿ

ಇಂದು ಬೆಳಿಗ್ಗೆ 11.30 ಕ್ಕೆ ಹರಿಹರ ನಗರದ ನಗರಸಭೆಯ ಆಯುಕ್ತರಾದ ಯಿರಮ್ಮ ರವರನ್ನು ಅವರ ಕಾರ್ಯಾಲಯದಲ್ಲಿ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಹರಿಹರ ತಾಲೂಕು ಕಾನಿಪ ಧ್ವನಿ ಅಧ್ಯಕ್ಷರಾದ ಶ್ರೀನಿವಾಸ ಹಾಗೂ ಹರಿಹರ ತಾಲೂಕಿನ ಪದಾಧಿಕಾರಿಗಳೆಲ್ಲರೂ ಖುದ್ದಾಗಿ ಬೇಟಿಯಾಗಿ ಬಹಳ ದಿನಗಳಿಂದ ಹರಿಹರ ನಗರದಲ್ಲಿರುವ ಪತ್ರಕರ್ತರ ಭವನಕ್ಕೆ ಸಂಬಂಧಿಸಿದಂತೆ ಕಾರ್ಯನಿರತ ಪತ್ರಕರ್ತರ ಸಂಘದ ನಾಮ ಫಲಕದ ಹೆಸರನ್ನು ತೆರವುಗೊಳಿಸಿ ಪ್ರತಿಯೊಬ್ಬ ಪತ್ರಕರ್ತರು ಮುಕ್ತವಾಗಿ ಈ ಪತ್ರಿಕಾ ಭವನವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬ ಉದ್ದೇಶ ಹಾಗೂ ಒಂದೇ ಸಂಘಟನೆಗೆ ಈ ಭವನ ಮೀಸಲಾಗದೇ ಯಾವುದೇ ಪತ್ರಕರ್ತರ ಸಂಘಟನೆಯ ಸದಸ್ಯರು ಇದರ ಪ್ರಯೋಜನೆಯ ಪಡೆಯಬೇಕೆಂಬ ಉದ್ದೇಶದಿಂದ ಸರ್ಕಾರಿ ಪತ್ರಿಕಾ ಭವನ ವೆಂಬ ನಾಮ ಫಲಕ ಹಾಕಲೆಬೇಕೆಂಬ ಕಾನಿಪ ಧ್ವನಿ ಸಂಘಟನೆಯ ಮನವಿಗೆ ವೃತಾ ಕಾಲದೂಡುತ್ತಾ ಹೋಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಕೂಡಲೇ ಕ್ರಮ ವಹಿಸಿ ಇಲ್ಲಾಂದ್ರೆ ಹಿಂಬರಹ ಇನ್ನು ಹತ್ತು ದಿನದೊಳಗೆ ನೀಡಲೇಬೇಕು ಎಂದು ಒತ್ತಾಯಿಸಿದಂತ ಸಂದರ್ಭ. ನಗರಸಭೆಯ ಆಯುಕ್ತರು ಇವೆರಡು ಮಾಡದಿದ್ದ ಸಂದರ್ಭದಲ್ಲಿ ಪ್ರಜಾಸೇವಾದಲ್ಲಿ ಈ ಕುರಿತು ಮನವಿಯ ಜೊತೆಗೆ ಕರ್ತವ್ಯ ನಿರ್ಲಕ್ಷದಡಿಯಲ್ಲಿ ದೂರನ್ನು ದಾಖಲಿಸಿ ಹೋರಾಟ ಅನಿವಾರ್ಯವೆಂದು ಅಧಿಕಾರಿಗೆ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಮನವರಿಕೆ ಮಾಡಿಕೊಟ್ಟಿದ್ದಾರೆ.

Leave a Comment

Your email address will not be published. Required fields are marked *

Scroll to Top