ಇಂದು ಬೆಳಿಗ್ಗೆ ನಸುಕಿನ ಜಾವದ 5 ಗಂಟೆಗೆ ನನ್ನ ಪ್ರೀತಿಯ ಪುಷ್ಪಕ ವಿಮಾನವಾದ ರಿಟ್ಜ್ ಕಾರಿನಲ್ಲಿ ಮಾಲಿಕ ಹಾಗೂ ಡ್ರೈವರ್ ಕಾಯಕದೊಂದಿಗೆ ಏಕಾಂಗಿಯಾಗಿ ದಾವಣಗೆರೆ ಜಿಲ್ಲೆ ಹರಿಹರ ನಗರದ ಪ್ರವಾಸಿ ಮಂದಿರದಿಂದ ಬೆಳಗಾವಿ ಜಿಲ್ಲಾ ಬೈಲಹೊಂಗಲದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯುವ ಬೆಳಗಾವಿ ಜಿಲ್ಲಾ ಕಾನಿಪ ಧ್ವನಿ ಸಾಮಾನ್ಯ ಸಭೆಯತ್ತಾ

ದಿನಾಂಕ:-11/11/2026 ರಂದು ಬೆಳಿಗ್ಗೆ 9 ಗಂಟೆಯಿಂದ ಪ್ರಾರಂಭವಾಗಿರುವ ನನ್ನ ಕಾನಿಪ ಧ್ವನಿ ಸಂಘಟನೆಯ ಹೋರಾಟದ ಧೃಡ ಚಿತ್ತದ ಪಯಣ ದಿನಾಂಕ:-07/12/2026 ರಂದು ಬೆಳಗಾವಿಯ ಸುವರ್ಣಾ ಸೌಧದ ಮುಂಬಾಗದಲ್ಲಿ ನಡೆಯುವ ಪತ್ರಕರ್ತರ ಹೋರಾಟದ ಸಮಸ್ತ ನಾಡಿನ ಪತ್ರಕರ್ತರಿಗೆ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸುವುದರ ಜೊತೆಗೆ ಇನ್ನೀತರ ಮೂಲಭೂತ ಸೌಕರ್ಯಗಳು ಸರ್ಕಾರದಿಂದ ಜಾರಿಯಾಗಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾಗುತ್ತಿರುವ ಹೋರಾಟಕ್ಕೆ 27 ದಿನಗಳ ಕಾಲ ರಾಜ್ಯದ 16 ಜಿಲ್ಲೆಗಳಿಗೆ ಭೇಟಿ ಕೊಟ್ಟು ಸಾಮಾನ್ಯ ಸಭೆಗಳನ್ನು ನಡೆಸುವುದರ ಮುಖಾಂತರ ಕಾನಿಪ ಧ್ವನಿಯನ್ನು ಬಲಗೊಳಿಸುವುದರ ಜೊತೆಗೆ ನಮ್ಮ ಪದಾಧಿಕಾರಿಗಳ ಜೊತೆ ಚಿಂತನ ಮಂತನದ ಜೊತೆಗೆ ಅವರ ಸಮಸ್ಯಗಳಿಗೆ ಧ್ವನಿಯಾಗುವುದರ ಜೊತೆಗೆ ಅವರ ಕಷ್ಟ ಸುಖಃಗಳಲ್ಲಿ ಭಾಗಿಯಾಗಿ ನಿಜವಾದ ಸಮಸ್ಯೆಗಳನ್ನು ಆಲಿಸಬೇಕೆಂದು ಕಳೆದ ಎರಡು ದಿನಗಳಿಂದ ಪ್ರಾರಂಭವಾದ ನನ್ನ ಈ ಹೋರಾಟದ ಪಯಣ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಿಂದ ಪ್ರಾರಂಭವಾಗಿ ತುಮಕೂರು,ಚಿತ್ರದುರ್ಗ, ದಾವಣಗೆರೆ ಜಿಲ್ಲೆ ಹರಿಹರ ಮುಗಿಸಿ ಇಂದು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಆತ್ಮೀಯ ದಿನಪತ್ರಿಕೆಯ ವರದಿಗಾರರು ಜೊತೆಗೆ ನಮ್ಮ ಸಂಘಟನೆಯ ಪದಾಧಿಕಾರಿಯಾದ ಸಾಹಿತಿ ರಾಜಶೇಖರ ರವರ ಮನೆಯಲ್ಲಿ ಇಂದು‌ ಬೆಳಿಗ್ಗೆ 9.30 ಕ್ಕೆ ಉಪಹಾರವನ್ನು ಅನೇಕ ಪದಾಧಿಕಾರಿಗಳ ಒಡಗೂಡಿ ಅವರ ಮನೆಯಲ್ಲಿ ಸೇವಿಸಿ ಅದೇ ಊರಿನ ಮತೊಬ್ಬ ಆತ್ಮೀಯ ನಮ್ಮ ಸಂಘಟನೆಯ ಹಸಿರು ಕ್ರಾಂತಿ ದಿನ ಪತ್ರಿಕೆಯ ವರದಿಗಾರರಾದ ಸಂಗೊಳ್ಳಿ ಯವರ ಪ್ರೀತಿಯ ಕರೆಯೋಲೆಯ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಪ್ರೀತಿಯ ಚಹಾವನ್ನು ಸವಿದು ಅಲ್ಲಿಂದ ಬೈಲಹೊಂಗಲದಲ್ಲಿ 11 ಗಂಟೆಗೆ ಪ್ರಾರಂಭವಾಗುವ ಬೆಳಗಾವಿ ಜಿಲ್ಲಾ ಕಾನಿಪ ಧ್ವನಿಯ ಸಾಮಾನ್ಯ ಸಭೆಯಲ್ಲಿ ಅನೇಕ ಸಂಘಟನೆ ವಿಚಾರಗಳನ್ನು ಸಂಜೆಯವರೆಗೆ ಸುದೀರ್ಘ ಚರ್ಚೆಯೊಂದಿಗೆ ಸಾಗಲಿದೆ. ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಷರು,ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ.ಮೊ:-9591630300

Leave a Comment

Your email address will not be published. Required fields are marked *

Scroll to Top