




-ಇಂದು ಸಂಜೆ 7.30 ಕ್ಕೆ ದಾವಣಗೆರೆ ಜಿಲ್ಲಾ ಕಾನಿಪ ಧ್ವನಿ ಸಾಮಾನ್ಯ ಸಭೆಯನ್ನು ಹರಿಹರದ ಪ್ರವಾಸಿ ಮಂದಿರದಲ್ಲಿ ರಾಜ್ಯಾಧ್ಯಕ್ಷ ರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಅಧ್ಯಕ್ಷತೆಯನ್ನು ವಹಿಸಿದರಲ್ಲದೆ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಸಂಘಟನೆ ಬಲಾಡ್ಯಗೊಳ್ಳುವುದರ ಜೊತೆಗೆ ಡಿಶೆಂಬರ್ 7 ರಂದು ಬೆಳಗಾವಿಯ ಸುವರ್ಣಾ ಸೌಧದ ಮುಂಭಾಗದಲ್ಲಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನಡೆಯುವ ಬೃಹತ್ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಾವಣಗೆರೆ ಜಿಲ್ಲೆಯಿಂದ ಪತ್ರಕರ್ತರು ಆಗಮಿಸಿ ಸರ್ಕಾರದ ಗಮನ ಸೆಳೆದು ಪತ್ರಕರ್ತರ ರಕ್ಷಣಾ ಕಾಯ್ದೆಯನ್ನು ಆದಷ್ಟು ಶೀಘ್ರ ಜಾರಿಗೆ ಒತ್ತಾಯಿಸೋಣ ವೆಂದು ಕರೆ ನೀಡಿದರು. ಕೊನೆಯಲ್ಲಿ ಕಾನಿಪ ಧ್ವನಿಯ ನೂತನ ಹಂಗಾಮಿ ಜಿಲ್ಲಾಧ್ಯಕ್ಷರನ್ನಾಗಿ ಗಿರೀಶ್ ವದಿಗೆರಿ, ಹರಿಹರ ತಾಲೂಕು ಅಧ್ಯಕ್ಷರಾಗಿ ಶ್ರೀನಿವಾಸ,ಮಲೆಬೆನ್ನೂರು ಘಟಕದ ಅಧ್ಯಕ್ಷರಾಗಿ ಮಹೇಶ್ವರಪ್ಪ ಭಾನುವಳ್ಳಿ ಹಾಗೂ ಕಾರ್ಯದರ್ಶಿಯನ್ನಾಗಿ ಎ.ಡಿ.ಕೊಟ್ರೇಶಪ್ಪ ಇವರನ್ನು ಸಭೆಗೆ ಸೇರಿದಂತ ಪದಾಧಿಕಾರಿ ಹಾಗೂ ಸದಸ್ಯರೆಲ್ಲರ ಒಪ್ಪಿಗೆ ಹಾಗೂ ಬಹುಮತದೊಂದಿಗೆ ರಾಜ್ಯ ಕಾರ್ಯಕಾರಿ ಸದಸ್ಯರಾದ ದೇವರಾಜ್ ಡಿ.ಬಳೆಗಾರ್, ಕಾನಿಪ ಧ್ವನಿ ಮುಖಂಡರುಗಳಾದ ಜಗಳೂರಿನ ರಫೀಕ್ ಅಹ್ಮದ್ ಹಾಗೂ ಬಸವರಾಜ್ .ಸಿ ರವರ ಉಪಸ್ಥಿತಿಯಲ್ಲಿ ಆಯ್ಕೆ ಮಾಡಿದ್ದು ಇಂದಿನ ಸಭೆಯ ವಿಶೇಷದ ಜೊತೆಗೆ ದಾವಣಗೆರೆಯಿಂದ ಕರ್ನಾಟಕ 1st ನ್ಯೂಸ್ 24 ನ ಸಂಪಾದಕರಾದ ಅನಿಲ್ ಕುಮಾರ್ ಬಿ. ರಾಯ್ಕರ್ ಹರಿಹರದ ಪ್ರವಾಸಿ ಮಂದಿರಕ್ಕೆ ಆಗಮಿಸಿ ಮಾಧ್ಯಮದಲ್ಲಿ ಪ್ರಸ್ತುತ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಹಾಗೂ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಪತ್ರಕರ್ತರ ಪರ ಕೈಗೊಳ್ಳುವ ಬೃಹತ್ ಹೋರಾಟದ ಕುರಿತಂತೆ ವಿಶೇಷ ಸಂದರ್ಶನವನ್ನು ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರೊಂದಿಗೆ ನಡೆಸಿದರು. 9591630300
