


ಇಂದು ಬೆಳಿಗ್ಗೆ ಬೆಳಗಾವಿ ಜಿಲ್ಲೆಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಹರಿಹರದ ಪ್ರವಾಸಿ ಮಂದಿರದಲ್ಲಿ ಸ್ನಾನ, ಸಂಧ್ಯಾವಂದನೆ, ಧ್ಯಾನ ಹಾಗೂ ಪ್ರಾಣಾಯಾಮವನ್ನು ಪೂರ್ಣಗೊಳಿಸಿದೆ.
ನನ್ನ ಪುಷ್ಪಕ ವಿಮಾನವಾದ ರಿಟ್ಜ್ ಕಾರಿಗೆ ಸ್ನಾನ ಮಾಡಿಸಿ, ಸ್ವಚ್ಛಗೊಳಿಸಿ ಪ್ರಯಾಣ ಮುಂದುವರಿಸಿದೆ.
ಮಾರ್ಗಮಧ್ಯೆ ಹುಬ್ಬಳ್ಳಿ ನಗರದಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಪಾಲಿಕೊಪ್ಪ ಗ್ರಾಮದ ಶೃಂಗೇರಿ ಶಾರದಾ ಪೀಠದವರಿಂದ ನಿರ್ಮಿಸಲ್ಪಟ್ಟಿರುವ ಶ್ರೀ ಕ್ಷೇತ್ರ ಶಿವಶಕ್ತಿ ಧಾಮಕ್ಕೆ ಭೇಟಿ ನೀಡಿ, ಅಲ್ಲಿನ ಈಶ್ವರ ಲಿಂಗಕ್ಕೆ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದೆ.
ನಂತರ ಸುಮಾರು ಅರ್ಧ ಗಂಟೆಗಳ ಕಾಲ 108 ಬಾರಿ ಮೃತ್ಯುಂಜಯ ಮಂತ್ರವನ್ನು ಧ್ಯಾನಪೂರ್ವಕವಾಗಿ ಪಠಿಸಿ, ಶಿವನ ಕೃಪೆ ಹಾಗೂ ಆಶೀರ್ವಾದವನ್ನು ಕೋರಿ ಅಲ್ಲಿಂದ ಕಿತ್ತೂರಿನ ಕಡೆಗೆ ಪ್ರಯಾಣ ಮುಂದುವರಿಸಿದೆ.
ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ।
ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಽಮೃತಾತ್ ॥
ಹರ ಹರ ಮಹಾದೇವ!
ಬಂಗ್ಲೆ ಮಲ್ಲಿಕಾರ್ಜುನ
ರಾಜ್ಯಾಧ್ಯಕ್ಷರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ಕಾನಿಪ ಧ್ವನಿ) ಸಂಘಟನೆ
ಮೊ: 9591630300
